ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ — ಶ್ರೀ ಕ್ಷೇತ್ರ ಹಾಡಿಕೆರೆ

ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ - ನಿಮ್ಮ ಶ್ರದ್ಧೆ, ಭಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯ ಪವಿತ್ರ ತಾಣ.

ದರ್ಶನದ ಸಮಯ

ಸೋಮವಾರ ಮತ್ತು ಶನಿವಾರ ವಿಶೇಷ ಪೂಜೆ: ಬೆಳಿಗ್ಗೆ 6:00 ರಿಂದ ರಾತ್ರಿ 8:00 ರವರೆಗೆ ನಿರಂತರ ದರ್ಶನ

ಇತರ ದಿನಗಳ ದರ್ಶನ: ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 1:00 | ಸಂಜೆ 4:30 ರಿಂದ ರಾತ್ರಿ 7:30

ಪ್ರತಿ ಸೋಮವಾರ ಮತ್ತು ಶನಿವಾರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾಸೋಹ ಪ್ರಸಾದ ವಿನಿಯೋಗವಿರುತ್ತದೆ.

ಹಾಡಿಕೆರೆ ಕ್ಷೇತ್ರದ ಬಗ್ಗೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಟ ಹಾಡಿಕೆರೆ ಬೆಟ್ಟುವಿನ ಪವಿತ್ರ ಭೂಮಿಯಲ್ಲಿ, ಮಂಗಳಪ್ರದಾಯಿನಿ ಶ್ರೀ ಕನ್ನಿಕಾ ಪರಮೇಶ್ವರಿಯೊಂದಿಗೆ ನೆಲೆಸಿರುವ ಭಕ್ತೋದ್ಧಾರಕ ಶಾಂತಮೂರ್ತಿ ಶ್ರೀ ಶನೇಶ್ವರ ದೇವಸ್ಥಾನವಿದೆ. ತಲೆಮಾರುಗಳಿಂದ ಭಕ್ತರು ತಮ್ಮ ಆಳವಾದ ದುಃಖ-ಆಶೆಗಳನ್ನು ಈ ಸನ್ನಿಧಾನಕ್ಕೆ ತಂದು, ಎಂದೂ ವಿಫಲವಾಗದ ದೈವಿಕ ಕೃಪೆಯನ್ನು ನಂಬಿದ್ದಾರೆ. ಈ ದೇವಸ್ಥಾನದ ಕಥೆ ಸುಮಾರು 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹೊಟೇಲಿನಲ್ಲಿ ಉದ್ಯೋಗ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ದಿ.ಕೆ. ರಾಮಸ್ವಾಮಿಯವರೊಂದಿಗೆ ಪ್ರಾರಂಭವಾಗುತ್ತದೆ. ಅವರು ತಮ್ಮ ಬಿಡುವಿನ ಸಮಯದಲ್ಲಿ ಮತ್ತಿಕೇರೆ ಶಾಂತಮೂರ್ತಿ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಸೇವೆ ಮಾಡುತ್ತಿದ್ದರು. ಒಂದು ರಾತ್ರಿ ನಿದ್ರಿಸುತ್ತಿದ್ದಾಗ, ಶ್ರೀ ಶನೇಶ್ವರ ಸ್ವಾಮಿ ಅವರ ಕನಸಿನಲ್ಲಿ ಪ್ರತ್ಯಕ್ಷವಾಗಿ, "ನಿನ್ನ ತಾಯಿ ನೆಲೆಸಿರುವ ಕೋಟದ ಹಾಡಿಕೆರೆ ಸ್ಥಳದಲ್ಲಿ ಒಂದು ಎಕ್ಕೆ ಗಿಡವಿದೆ. ಅಲ್ಲಿ ನನ್ನನ್ನು ಪ್ರತಿಷ್ಠಾಪಿಸಿ, ಆರಾಧಿಸು" ಎಂದು ಹೇಳಿದರು. ಈ ದೈವಿಕ ಆಜ್ಞೆಯಿಂದ ಪ್ರೇರಿತರಾಗಿ, ರಾಮಸ್ವಾಮಿಯವರು ಊರಿಗೆ ಮರಳಿದರು. ಸ್ವಂತ ಹಣವಿಲ್ಲದಿದ್ದರೂ, ಭಕ್ತರ ಸಹಾಯದಿಂದ 1995ರಲ್ಲಿ ಆ ಸ್ಥಳದಲ್ಲಿ ಶ್ರೀ ಶನೇಶ್ವರನ ಸಣ್ಣದಾದ ಗುಡಿಯನ್ನು ಪ್ರತಿಷ್ಠಾಪಿಸಿದರು. ಸಣ್ಣ ಆರಂಭವು ಕ್ರಮೇಣ ಅದ್ಭುತವಾಗಿ ಬೆಳೆಯಿತು. ಬದುಕಿನ ಕಷ್ಟ-ಕೊರತೆಗಳಿಂದ ಜರ್ಜರಿತರಾದ ಭಕ್ತರು — ಸಂತಾನ ಇಲ್ಲದವರು, ಉದ್ಯೋಗ ಬೇಡುವವರು, ಗೃಹ ಕಲಹದಿಂದ ನೊಂದವರು — ಹಾಡಿಕೆರೆಯ ಶಾಂತಮೂರ್ತಿ ಶ್ರೀ ಶನೇಶ್ವರನ ಪಾದಪದ್ಮಗಳಿಗೆ ಶರಣಾಗಲು ಬಂದರು. ಕೆಲವೇ ದಿನಗಳಲ್ಲಿ ಅವರ ದುಃಖ-ದುಗುಡಗಳು ಪರಿಹಾರವಾಗಿ, ಬದುಕಿನಲ್ಲಿ ಸುಖ-ಶಾಂತಿ-ನೆಮ್ಮದಿಯ ಬೆಳಕು ಹರಿಯಿತು. ಈ ಕರುಣಾಮಯಿ ಸನ್ನಿಧಾನದ ಸುದ್ದಿ ಹರಡಿತು — ವಾರದಲ್ಲಿ ಎರಡು ದಿನ (ಸೋಮವಾರ, ಶನಿವಾರ) ಕೇವಲ ಐದು ಜನರಿಂದ ಪ್ರಾರಂಭವಾದ ಅನ್ನದಾನ ಇಂದು ಸಾವಿರಾರು ಭಕ್ತಾದಿಗಳಿಗೆ ಅನ್ನ ಪ್ರಸಾದವನ್ನು ನೀಡುತ್ತಿದೆ. ಶ್ರೀ ಕೆ. ರಾಮಸ್ವಾಮಿ ಅವರು 2021ರಲ್ಲಿ ದೈವಾಧೀನರಾದರು. ಆದರೆ ಅವರು ತೋರಿದ ಮಾರ್ಗ ಇಂದಿಗೂ ಬೆಳಗುತ್ತಿದೆ — ಭಾಸ್ಕರ ಸ್ವಾಮಿ ಅವರ ಮುಂದಾಳತ್ವದಲ್ಲಿ ದೇವರ ಪೂಜಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಂದಿಗೂ ಈ ದೇವಸ್ಥಾನ ಭಕ್ತರ ಆಶ್ರಯತಾಣ: ಹತ್ತು-ಇಪ್ಪತ್ತು ವರ್ಷಗಳಿಂದ ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ, ಉದ್ಯೋಗ ಬೇಡಿ ಬಂದವರಿಗೆ ಉದ್ಯೋಗ, ಮತ್ತು ಗೃಹ ಶಾಂತಿ ಇಲ್ಲದವರಿಗೆ ನೆಮ್ಮದಿಯನ್ನು ನೀಡುತ್ತಿದೆ. ಭಕ್ತಾದಿಗಳು ಇಲ್ಲಿ ಶ್ರೀ ಶನೇಶ್ವರ ದೇವರಿಗೆ ಎಳ್ಳು ಎಣ್ಣೆ ಅಭಿಷೇಕವನ್ನೂ ಮಾಡುತ್ತಾರೆ. ವರ್ಷಕ್ಕೆ ಮೂರು ಬಾರಿ (ಫೆಬ್ರವರಿ, ನವೆಂಬರ್, ಆಗಸ್ಟ್) ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶನಿ ಶಾಂತಿಯನ್ನು ನಡೆಸಲಾಗುತ್ತದೆ.

ಸಂಪರ್ಕ ಮಾಹಿತಿ ಮತ್ತು ವಿಳಾಸ

ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಹಾಡಿಕೆರೆ, ಬ್ರಹ್ಮಾವರ ತಾಲ್ಲೂಕು, ಉಡುಪಿ ಜಿಲ್ಲೆ, ಕರ್ನಾಟಕ - 576221

ದೂರವಾಣಿ ಸಂಖ್ಯೆ: +91 99022 07990, +91 87929 78777

ಇಮೇಲ್ ವಿಳಾಸ: shanthamoorthyshaneshwara1995@gmail.com

Shantamurthy Sri Shaneshwara Temple — Sri Kshetra Haadikere

Shantamurthy Sri Shaneshwara Temple - A sacred sanctuary of faith, supreme devotion, and spiritual tranquility.

Darshan Timings

Monday & Saturday: 6:00 AM to 8:00 PM

Other Days: 7:00 AM to 1:00 PM | 4:30 PM to 7:30 PM

Every Monday and Saturday, special offerings and prasad are served to all devotees.

The Sacred Legacy of Shantamurti Shri Shaneshwara

Nestled in the sacred soil of Hadikere Bettu, Kota — in the Brahmavara taluk of Udupi district — stands the temple of Shantamurti Shri Shaneshwara, worshipped alongside Mangala-pradayini Shri Kannika Parameshwari. For generations, devotees have carried their deepest sorrows and hopes to this sanctum, trusting in a divine grace that has never failed to answer. The temple's story begins nearly three decades ago with a humble hotel worker in Bengaluru, D.K. Ramaswamy. In his free hours, he found peace in service at the Shri Shaneshwara Swami temple in Mattikere. One night, as he slept, Lord Shaneshwara appeared to him in a vision. "In the place where your mother resides — Hadikere, Kota — there stands a fig tree," the Lord said. "Install me there, and worship me." Moved by this divine call, Ramaswamy returned to his village. He had no wealth of his own, but the devotion of fellow villagers carried him forward — and in 1995, a small shrine to Shri Shaneshwara was consecrated on that very spot. What began modestly grew into something extraordinary. Devotees crushed by hardship — childless couples yearning for a child, the unemployed searching for purpose, families torn by discord — began arriving at Shaneshwara's feet in Hadikere. Time and again, within days, their burdens lifted. Peace returned where there had been despair. Word of this compassionate presence spread, and what started as annadana (food offering) for just five people, twice a week on Mondays and Saturdays, has today grown into a service feeding thousands of devotees. Shri K. Ramaswamy attained his divine abode in 2021. Yet the path he lit continues undimmed — under the guidance of Bhaskar Swami, the temple's daily worship and sacred rites carry his legacy forward. To this day, the temple remains a refuge for those in need: blessing childless couples with the joy of parenthood, opening doors of employment for the searching, and restoring harmony to troubled homes. Devotees also offer oil and rice abhisheka to Shri Shaneshwara here. Three times each year — in February, August, and November — the temple conducts a collective Shani Shanti ritual for the wellbeing of all who seek it.

Contact Information & Directions

Shantamurthy Sri Shaneshwara Temple, Sri Kshetra Haadikere, Brahmavara Taluk, Udupi District, Karnataka - 576221

Phone Contacts: +91 99022 07990, +91 87929 78777

Email Address: shanthamoorthyshaneshwara1995@gmail.com